Abdul Rasheed
Taking the name you gave the rivers,
taking the name you gave the hills,
taking the name you gave the trees and plants,
three boys walk next to the river.
 
Sand at the surface, water in the middle,
floating they came, the flowery girls,
floating came three flower-like girls,
holding two champa tufts in heart,
hibiscus in the middle,
a palm flower in the lips below the nose,
a hundred flowers in the three backs.
 
Name given by whom will the rivers bear?
Name given by whom will the hills bear?
Name given by whom will the trees and plants bear?
 
The boys walk chanting the name you assigned,
searching for you the waters of the river,
the statue shown by you, the path pointed by you,
chanting the sacred lines taught by you.
 
A coupled snake and fish in the river's hole,
two black twined tree roots;
water springs at the coupling formed
whether fish mated the snake, or snake the fish.
 
Taking the name you gave the rivers
Taking the name you gave the hills…
 
Ceding the flowers of the heart, the girls
took to their lips the tash of snake-fish,
deserting your path the three boys
wore the girls' floral hearts.
Snakes and fish left the river,
took to the shores and left clambering up a tree.
 
Name given by whom will the rivers bear?
Name given by whom will the hills bear?
Name given by whom will the trees and plants bear?
 
ಧರ್ಮಗುರುವಿಗೆ
 
ನದಿಗಳಿಗೆ ನೀವಿಟ್ಟ ಹೆಸರು ಹಿಡಿದು
ಮಲೆಗಳಿಗೆ ನೀವಿಟ್ಟ ಹೆಸರು ಹಿಡಿದು
ಮರಗಿಡಗಳಿಗೆ ನೀವಿಟ್ಟ ಹೆಸರು ಹಿಡಿದು
ನದಿಯ ಬದಿಯಲ್ಲಿ ನಡೆವ ಮೂರು ಹುಡುಗರು.
 
ತಳದಲ್ಲಿ ಮರಳು ನಡುವಲ್ಲಿ ನೀರು
ತೇಲಿ ಬಂದರು ಅವರು ಹೂವಂತ ಹುಡುಗಿಯರು
ತೇಲಿ ಬಂದರು ಮೂರು ಹೂವಂತ ಹುಡುಗಿಯರು
 
ಎದೆಯಲ್ಲಿ ಹಿಡಿಯೆರಡು ಸಂಪಿಗೆ ಹಿಡಿ
ನಡುವಲ್ಲಿ ದಾಸವಾಳ
ಮೂಗ ಕೆಳಗಿನ ತುಟಿಯಲ್ಲೊಂದು ತಾಳೆಯ ಹೂವು
ಮೂರು ಬೆನ್ನುಗಳಲ್ಲೂ ನೂರು ಹೂವು
 
ನದಿಗಳಿಗೆ ಯಾರಿಟ್ಟ ಹೆಸರು ಉಳಿಯುವುದು?
ಮಲೆಗಳಿಗೆ ಯಾರಿಟ್ಟ ಹೆಸರು ಉಳಿಯುವುದು?
ಮರಗಿಡಗಳಿಗೆ ಯಾರಿಟ್ಟ ಹೆಸರು ಉಳಿಯುವುದು?
 
ನಡೆಯುವರು ಹುಡುಗರು ನೀವಿಟ್ಟ ಹೆಸರು ಪಠಿಸಿ
ನದಿಯ ನೀರಲ್ಲೆಲ್ಲ ನಿಮ್ಮ ಹುಡುಕಿ
ನೀವು ಹೇಳಿದ ಮೂರ್ತಿ, ನೀವು ತೋರಿದ ಹಾದಿ
ನಿಮ್ಮ ದೈವದ ಸಾಲುಗಳನ್ನು ಜಪಿಸಿ
 
ನದಿಯ ಬಿಲದಲ್ಲೊಂದು ಹಾವು ಮೀನಿನ ಜೋಡಿ
ಎರಡು ಕಪ್ಪಗೆ ಬಿದ್ದ ಮರದ ಬೇರಿನ ಜೋಡಿ
ಮೀನು ಹಾವ ಎಣೆದೋ, ಹಾವು ಮೀನ ಎಣೆದೋ
ನೀರು ಹುಟ್ಟುವ ಹೊತ್ತು ಉಂಟಾದ ಜೋಡಿ
 
ನದಿಗಳಿಗೆ ನೀವಿಟ್ಟ ಹೆಸರು ಹಿಡಿದು
ಮಲೆಗಳಿಗೆ ನೀವಿಟ್ಟ ಹೆಸರು ಹಿಡಿದು
 
ಎದೆಯ ಹೂಗಳನು ತೊರೆದ ಹುಡುಗಿಯರು
ಹಾವು ಮೀನಿನ ಮೀಸೆ ತುಟಿಯ ಮೇಲಿಟ್ಟರು
ನಿಮ್ಮ ದಾರಿಯ ತೊರೆದ ಮೂವರು ಹುಡುಗರು
ಹುಡುಗಿಯೆದೆಯ ಹೂಗಳನು ನಡುವಿಗಿಟ್ಟರು
ನದಿಯ ತೊರೆದ ಹಾವು ಮೀನುಗಳು
ಬರೆಯ ಹತ್ತಿ ಮರವನೇರಿ ಹೋದವು.
 
ನದಿಗಳಿಗೆ ಯಾರಿಟ್ಟ ಹೆಸರು ಉಳಿಯುವುದು?
ಮಲೆಗಳಿಗೆ ಯಾರಿಟ್ಟ ಹೆಸರು ಉಳಿಯುವುದು?
ಮರಗಿಡಗಳಿಗೆ ಯಾರಿಟ್ಟ ಹೆಸರು ಉಳಿಯುವುದು?
 
ധര്മഗുരുവിഗെ
 
നദിഗളിഗെ നീവിട്ട ഹെസരു ഹിഡിദു മലെഗളിഗെ നീവിട്ട ഹെസരു ഹിഡിദു മരഗിഡഗളിഗെ നീവിട്ട ഹെസരു ഹിഡിദു നദിയ ബദിയല്ലി നഡെവ മൂരു ഹുഡുഗരു തളദല്ലി മരളു നഡുവല്ലി നീരു തേലി ബംദരു അവരു ഹൂവംത ഹുഡുഗിയരു തേലി ബംദരു മൂരു ഹൂവംത ഹുഡുഗിയരു എദെയല്ലി ഹിഡിയെരഡു സംപിഗെ ഹിഡി നഡുവല്ലി ദാസവാള മൂഗ കെളഗിന തുടിയല്ലൊംദു താളെയ ഹൂവു മൂരു ബെന്നുഗളല്ലൂ നൂരു ഹൂവു നദിഗളിഗെ യാരിട്ട ഹെസരു ഉളിയുവുദു മലെഗളിഗെ യാരിട്ട ഹെസരു ഉളിയുവുദു മരഗിഡഗളിഗെ യാരിട്ട ഹെസരു ഉളിയുവുദു നഡെയുവരു ഹുഡുഗരു നീവിട്ട ഹെസരു പഠിസി നദിയ നീരല്ലെല്ല നിമ്മ ഹുഡുകി നീവു ഹേളിദ മൂര്തി, നീവു തോരിദ ഹാദി നിമ്മ ദൈവദ സാലുഗളന്നു ജപിസി നദിയ ബിലദല്ലൊംദു ഹാവു മീനിന ജോഡി എരഡു കപ്പഗെ ബിദ്ദ മരദ ബേരിന ജോഡി മീനു ഹാവ എണെദോ, ഹാവു മീന എണെദോ നീരു ഹുട്ടുവ ഹൊത്തു ഉംടാദ ജോഡി നദിഗളിഗെ നീവിട്ട ഹെസരു ഹിഡിദു മലെഗളിഗെ നീവിട്ട ഹെസരു ഹിഡിദു എദെയ ഹൂഗളനു തൊരെദ ഹുഡുഗിയരു ഹാവു മീനിന മീസെ തുടിയ മേലിട്ടരു നിമ്മ ദാരിയ തൊരെദ മൂവരു ഹുഡുഗരു ഹുഡുഗിയെദെയ ഹൂഗളനു നഡുവിഗിട്ടരു നദിയ തൊരെദ ഹാവു മീനുഗളു ബരെയ ഹത്തി മരവനേരി ഹോദവു നദിഗളിഗെ യാരിട്ട ഹെസരു ഉളിയുവുദു മലെഗളിഗെ യാരിട്ട ഹെസരു ഉളിയുവുദു മരഗിഡഗളിഗെ യാരിട്ട ഹെസരു ഉളിയുവുദു